ಕ್ಯಾರೆಟ್ ಹಲ್ವಾ ಕಡಿಮೆ ಸಮಯದಲ್ಲಿ ಮಾಡಬಹುದಾದ ಸಿಹಿ ತಿನಿಸು.
ಬೇಕಾಗುವ ಸಾಮಾಗ್ರಿಗಳು:
ಟಿಪ್ಸ್:
ಬೇಕಾಗುವ ಸಾಮಾಗ್ರಿಗಳು:
- ಕ್ಯಾರೆಟ್ ತುರಿ- 2ಕಪ್
- ಹಾಲು-1/2ಕಪ್
- ಸಕ್ಕರೆ-1/4ಕಪ್
- ಕಂಡೆನ್ಸ್ಡ್ ಮಿಲ್ಕ್-2 ಟೀ ಚ
- ತುಪ್ಪ-2ಟೀ ಚ
- ಏಲಕ್ಕಿ ಪುಡಿ-1/4 ಟೀ ಚ (ಬೇಕಾದಲ್ಲಿ)
- ದ್ರಾಕ್ಷಿ,ಗೋಡಂಬಿ,ಬಾದಾಮಿ ಚೂರು-1/4ಕಪ್
- ಮೊದಲಿಗೆ ದಪ್ಪ ತಳದ ಪಾತ್ರೆಯಲ್ಲಿ ಕ್ಯಾರೆಟ್ ತುರಿಯನ್ನು ಹಾಕಿ ಚೆನ್ನಾಗಿ 15-20 ನಿಮಿಷ ಹುರಿಯಬೇಕು.ಚೆನ್ನಾಗಿ ಬೆಂದು ಅರ್ಧದಷ್ಟು ಆಗಲಿ.
- ಅದಕ್ಕೆ ಹಾಲನ್ನು ಸೇರಿಸಿ ಮಿಶ್ರ ಮಾಡಿ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿ.
- ಬೆಂದು ಮೆತ್ತಗಾದ ಕ್ಯಾರೆಟ್ ಮಿಶ್ರಣಕ್ಕೆ ಸಕ್ಕರೆ ಹಾಕಿ ಕರಗಿಸಿ,ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಕಲಸಿ.
- ದ್ರಾಕ್ಷಿ,ಗೋಡಂಬಿ,ಬಾದಾಮಿ ಚೂರು, ಏಲಕ್ಕಿ ಪುಡಿ ಹಾಕಿ ಕಲಸಿ.
- ರುಚಿ-ರುಚಿಯಾದ ಕ್ಯಾರೆಟ್ ಹಲ್ವಾ ತಿನ್ನಲು ರೆಡಿ.
ಟಿಪ್ಸ್:
- ಕಂಡೆನ್ಸ್ಡ್ ಮಿಲ್ಕ್ ಹಲ್ವಾದ ಹದ ಮತ್ತು ರುಚಿಯನ್ನು ಹೆಚ್ಚಿಸುತ್ತದೆ.ಬರಿ ಹಾಲಿನಲ್ಲೂ ಮಾಡಬಹುದು.
- ಏಲಕ್ಕಿ ಪುಡಿ ಬೇಡವಾದಲ್ಲಿ ಬಿಡಿ.


