Saturday, 15 April 2017

ಶೇಂಗಾ ಚಟ್ನಿ

          ಇದು ಒಂದು ಉತ್ತರ ಕರ್ನಾಟಕ ಖಾದ್ಯ .ಹುರಿದಿಟ್ಟ ಶೇಂಗಾ ಬೀಜ ಇದ್ದರೆ ಮಾಡುವುದು ಬಲು ಸುಲಭ ಮತ್ತು ರುಚಿಕರ.ಇದನ್ನು ಅನ್ನದೊಂದಿಗೆ,ದೋಸೆ, ಇಡ್ಲಿ, ಚಪಾತಿ,ರೊಟ್ಟಿ,ಎಲ್ಲವುದರ ಜೊತೆ ಸವಿಯಬಹುದು.

ಬೇಕಾಗುವ ಸಾಮಾಗ್ರಿಗಳು:

  • 1 ಕಪ್ ಶೇಂಗಾ ಕಾಳು
  • 3 ಹಸಿಮೆಣಸು
  • 3 ಬೆಳ್ಳುಳ್ಳಿ ಎಸಳು
  • ಸ್ವಲ್ಪ ಕೊತ್ತಂಬರಿಸೊಪ್ಪು
  • 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು
  • 1 ಎಸಳು ಕರಿಬೇವು
  • 1/4 ಚಮಚ ಸಾಸಿವೆ
  • 1/4 ಚಮಚ ಜೀರಿಗೆ
  • 1 ಒಣಮೆಣಸು
  • 2 ಚಮಚ ಎಣ್ಣೆ
  • ರುಚಿಗೆ ಉಪ್ಪು
  • ಚಿಟಿಕೆ ಬೆಲ್ಲ (ಬೇಕಾದಲ್ಲಿ)
ಮಾಡುವ ವಿಧಾನ:
  1. ಮೊದಲಿಗೆ ಶೇಂಗಾಕಾಳನ್ನು ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಹುರಿದು,ಆರಿಸಿ , ಸಿಪ್ಪೆ ಸುಲಿದು ಬದಿಗಿಡಿ.
  2. ಅದೇ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಹಸಿಮೆಣಸು ತುಂಡರಿಸಿ ಹಾಕಿ ಹುರಿದು ಆರಿಸಿ,ಸಿಪ್ಪೆ ತೆಗೆದ ಬೆಳ್ಳುಳ್ಳಿ , ಕರಿಬೇವು ಸೇರಿಸಿ.
  3. ಮಿಕ್ಸಿ ಜಾರಿನಲ್ಲಿ ತಯಾರಿಸಿದ ಶೇಂಗಾಕಾಳು,ಹುರಿದ ಮಿಶ್ರಣ,ಕೊತ್ತಂಬರಿಸೊಪ್ಪು,ಉಪ್ಪು,ಜೀರಿಗೆ,ಚಿಟಿಕೆ ಬೆಲ್ಲ ಎಲ್ಲವನ್ನು ಒಟ್ಟಿಗೆ ರುಬ್ಬಿ.
  4. ಮತ್ತೆ ಅದೇ ಬಾಣಲೆಗೆ ಎಣ್ಣೆ , ಸಾಸಿವೆ ಹಾಕಿ ಸಿಡಿಸಿ,ಜೀರಿಗೆ ,ಕರಿಬೇವು ,ಮುರಿದ ಒಣಮೆಣಸು ಹಾಕಿ ಚಟ್ನಿಗೆ ಒಗ್ಗರಣೆ ಕೊಡಿ.
  5. ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಮಿಶ್ರ ಮಾಡಿ.
ರುಚಿ-ರುಚಿಯಾದ ಶೇಂಗಾಚಟ್ನಿ ಬಿಸಿ-ಬಿಸಿ ಅನ್ನದೊಂದಿಗೆ ಸವಿಯಲು ಸಿದ್ಧ.

ಟಿಪ್ಸ್:
  • ಹಸಿಮೆಣಸು ಖಾರಕ್ಕೆ ತಕ್ಕಂತೆ ಬಳಸಿ.
  • ಮೊದಲೇ ಹುರಿದಿಟ್ಟ ಶೇಂಗಾ ಇದ್ದಲ್ಲಿ ಸ್ವಲ್ಪ ಬೆಚ್ಚಗೆ ಮಾಡಿಕೊಂಡು ಬಳಸಿ.
  • ಈರುಳ್ಳಿ ಇಷ್ಟ ಇಲ್ಲದವರು ಚಟ್ನಿಗೆ ಸೇರಿಸದೆ , ಬದಿಯಲ್ಲಿ ಸಲಾಡ್ ರೂಪದಲ್ಲಿ ನೀಡಿ.

*ಮಾಡಿ ನೋಡಿ...ತಿನ್ನಿ ತಿಳಿಸಿ...

No comments:

Post a Comment