ಅಕ್ಕಿ ಕಡ್ಲೆಬೇಳೆ ಪಾಯಸವನ್ನು ರಾಮನವಮಿ ವಿಶೇಷ ಖಾದ್ಯವಾಗಿ ತಯಾರಿಸಲಾಗುತ್ತದೆ.ಈ ಪಾಯಸ ತಿನ್ನಲು ಬಲು ರುಚಿ.
ಬೇಕಾಗುವ ಸಾಮಾಗ್ರಿಗಳು:
ಮಾಡುವ ವಿಧಾನ:
ಬೇಕಾಗುವ ಸಾಮಾಗ್ರಿಗಳು:
- 1/2 ಕಪ್ ಅಕ್ಕಿ
- 1/4 ಕಪ್ ಕಡ್ಲೆಬೇಳೆ
- 2 ಟೀ ಚ ಗಸೆಗಸೆ
- 3/4 ಕಪ್ ಬೆಲ್ಲ
- 1/2 ಕಪ್ ತೆಂಗಿನತುರಿ
- ದ್ರಾಕ್ಷಿ,ಗೋಡಂಬಿ
- ಚಿಟಿಕೆ ಏಲಕ್ಕಿ ಪುಡಿ
- 1/2 ಲೋಟ ಹಾಲು (ಬೇಕಾದಲ್ಲಿ)
ಮಾಡುವ ವಿಧಾನ:
- ಅಕ್ಕಿ ಹಾಗೂ ಕಡ್ಲೇಬೇಳೆಯನ್ನು ನೀರು ಹಾಕಿ ಬೇಯಿಸಿ.
- ಗಸೆಗಸೆ ಹುರಿದು ತೆಗೆದಿಡಿ.
- ತೆಂಗಿನತುರಿ,ಹುರಿದ ಗಸೆಗಸೆ ರುಬ್ಬಿ ರೆಡಿ ಇಡಿ.
- ಬೆಲ್ಲಕ್ಕೆ ನೀರು ಹಾಕಿ ಕರಗಿಸಿ ,ಬೆಂದ ಅಕ್ಕಿ ಕಡ್ಲೆಬೇಳೆ ಮಿಶ್ರಣಕ್ಕೆ ಸೇರಿಸಿ ಕೈಯಾಡಿಸಿ.
- ಅದಕ್ಕೆ ರುಬ್ಬಿದ ಪೇಸ್ಟ್, ಏಲಕ್ಕಿ ಪುಡಿ ಸೇರಿಸಿ.
- ತುಪ್ಪದಲ್ಲಿ ದ್ರಾಕ್ಷಿ,ಗೋಡಂಬಿ ಹುರಿದು ಸೇರಿಸಿ ಮಿಶ್ರ ಮಾಡಿ.
- ಪಾಯಸ ಸ್ವಲ್ಪ ನೀರಾಗೆ ಇರಲಿ,ಆರಿದ ಮೇಲೆ ಗಟ್ಟಿಯಾಗುತ್ತದೆ. ಬೇಕಾದ ಹದಕ್ಕೆ ಪಾಯಸ ತಯಾರಿಸಿ.
- ಇಡೀ ಏಲಕ್ಕಿಯನ್ನು ಕಾಯಿ ರುಬ್ಬುವಾಗ ಸೇರಿಸಿ ರುಬ್ಬಬಹುದು.
- ಒಣಕೊಬ್ಬರಿ ತುರಿಯನ್ನು ಬಳಸಬಹುದು.
*ಮಾಡಿ ನೋಡಿ...ತಿನ್ನಿ ತಿಳಿಸಿ...
No comments:
Post a Comment