Tuesday, 11 April 2017

ಶೇಂಗಾ ಚಟ್ನಿ ಪುಡಿ

  ಇದು ಉತ್ತರಕರ್ನಾಟಕದ ಜನಪ್ರಿಯ ಖಾದ್ಯ.
ಬೇಕಾಗುವ ಸಾಮಾಗ್ರಿಗಳು:
  • 2 ಕಪ್ ಶೇಂಗಾಕಾಳು
  • 1/2 ಕಪ್ ಪುಟಾಣಿ/ಹುರಿಗಡಲೆ (ಬೇಕಾದಲ್ಲಿ)
  • 8-10 ಸಿಪ್ಪೆ ತೆಗೆದ ಬೆಳ್ಳುಳ್ಳಿ
  • 10-18 ಒಣಮೆಣಸಿನಕಾಯಿ
  • 10 ಎಲೆ ಕರಿಬೇವು
  • ಉಪ್ಪು ರುಚಿಗೆ
  • ಸಣ್ಣ ಲಿಂಬೆ ಗಾತ್ರದ ಹುಣಸೆಹಣ್ಣು
ಮಾಡುವ ವಿಧಾನ:
  1. ಬಾಣಲೆಗೆ ಶೇಂಗಾಕಾಳು ಹಾಕಿ ಎಣ್ಣೆ ಹಾಕದೆ ಕೆಂಪಗೆ ಹುರಿದು , ಆರಲು ಬಿಡಿ.
  2. ಒಣಮೆಣಸಿನಕಾಯಿ ಸಣ್ಣಉರಿಯಲ್ಲಿ ಹುರಿಯಿರಿ,ಅದಕ್ಕೆ ಕರಿಬೇವು,ಬೆಳ್ಳುಳ್ಳಿ ಸೇರಿಸಿ.
  3. ಆರಿದ ಶೇಂಗಾಬೀಜವನ್ನು ಚೆನ್ನಾಗಿ ಉಜ್ಜಿ ಸಿಪ್ಪೆ ತೆಗೆಯಿರಿ.
  4. ಮಿಕ್ಸಿ ಜಾರಿನಲ್ಲಿ ಸಿಪ್ಪೆ ತೆಗೆದ ಶೇಂಗಾಕಾಳು,ಪುಟಾಣಿ,ಬೆಳ್ಳುಳ್ಳಿ,ಕರಿಬೇವು,ಒಣಮೆಣಸು,ಉಪ್ಪು,ಹುಣಸೆಹಣ್ಣು ಎಲ್ಲವನ್ನು ಹಾಕಿ ರುಬ್ಬಿ.ಸ್ವಲ್ಪ ತರಿತರಿಯಾಗಿರಲಿ.
  5. ಜೋಳದ ರೊಟ್ಟಿ,ಮೊಸರು ಜೊತೆ,ದೋಸೆಯ ಮೇಲೆ ಉದುರಿಸಲು,ಪ್ರಯಾಣ ಮಾಡುವಾಗ ಬಳಸಲು ಚೆನ್ನಾಗಿರುತ್ತದೆ.
  6. ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟರೆ 2 ತಿಂಗಳು ಮೇಲ್ಪಟ್ಟು ಇಡಬಹುದು.
ಟಿಪ್ಸ್:
  • ರುಬ್ಬುವಾಗ -ಒಂದೇ ಸಲಕ್ಕೆ ರುಬ್ಬಬೇಡಿ,ನಿಲ್ಲಿಸಿ ನಿಲ್ಲಿಸಿ ರುಬ್ಬಿ.ಇಲ್ಲವಾದಲ್ಲಿ ಶೇಂಗಾಕಾಳು ಎಣ್ಣೆ ಬಿಟ್ಟು ಪೇಸ್ಟ್ ರೀತಿ ಆಗುತ್ತದೆ.
  • ಒಣಮೆಣಸಿನ ಬದಲು ಖಾರದ ಪುಡಿ ಬಳಸಬಹುದು.ಮನೆಯಲ್ಲೆ ತಯಾರಿಸಿದ ಖಾರದ ಪುಡಿಯಾದಲ್ಲಿ ರುಚಿ ಹೆಚ್ಚುತ್ತದೆ.
  • ಬ್ಯಾಡಗಿ ಮೆಣಸು ಬಣ್ಣಕ್ಕೆ,ಗುಂಟೂರು ಮೆಣಸು ಖಾರಕ್ಕೆ ಬಳಸಬಹುದು.
***ಮಾಡಿ ನೋಡಿ...ತಿನ್ನಿ ತಿಳಿಸಿ...

No comments:

Post a Comment