Thursday, 27 April 2017

ಕ್ಯಾರೆಟ್ ಹಲ್ವಾ

 ಕ್ಯಾರೆಟ್ ಹಲ್ವಾ ಕಡಿಮೆ ಸಮಯದಲ್ಲಿ ಮಾಡಬಹುದಾದ ಸಿಹಿ ತಿನಿಸು.
ಬೇಕಾಗುವ ಸಾಮಾಗ್ರಿಗಳು:

  • ಕ್ಯಾರೆಟ್ ತುರಿ- 2ಕಪ್
  • ಹಾಲು-1/2ಕಪ್
  • ಸಕ್ಕರೆ-1/4ಕಪ್
  • ಕಂಡೆನ್ಸ್ಡ್ ಮಿಲ್ಕ್-2 ಟೀ ಚ
  • ತುಪ್ಪ-2ಟೀ ಚ
  • ಏಲಕ್ಕಿ ಪುಡಿ-1/4 ಟೀ ಚ (ಬೇಕಾದಲ್ಲಿ)
  • ದ್ರಾಕ್ಷಿ,ಗೋಡಂಬಿ,ಬಾದಾಮಿ ಚೂರು-1/4ಕಪ್
ಮಾಡುವ ವಿಧಾನ:

  1. ಮೊದಲಿಗೆ ದಪ್ಪ ತಳದ ಪಾತ್ರೆಯಲ್ಲಿ ಕ್ಯಾರೆಟ್ ತುರಿಯನ್ನು ಹಾಕಿ ಚೆನ್ನಾಗಿ  15-20 ನಿಮಿಷ ಹುರಿಯಬೇಕು.ಚೆನ್ನಾಗಿ ಬೆಂದು ಅರ್ಧದಷ್ಟು ಆಗಲಿ.
  2. ಅದಕ್ಕೆ ಹಾಲನ್ನು ಸೇರಿಸಿ ಮಿಶ್ರ ಮಾಡಿ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿ.
  3. ಬೆಂದು ಮೆತ್ತಗಾದ ಕ್ಯಾರೆಟ್ ಮಿಶ್ರಣಕ್ಕೆ ಸಕ್ಕರೆ ಹಾಕಿ ಕರಗಿಸಿ,ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಕಲಸಿ.
  4. ದ್ರಾಕ್ಷಿ,ಗೋಡಂಬಿ,ಬಾದಾಮಿ ಚೂರು, ಏಲಕ್ಕಿ ಪುಡಿ ಹಾಕಿ ಕಲಸಿ.
  5. ರುಚಿ-ರುಚಿಯಾದ ಕ್ಯಾರೆಟ್ ಹಲ್ವಾ ತಿನ್ನಲು ರೆಡಿ.
ಮಾಡಿ ನೋಡಿ,ತಿಂದು ತಿಳಿಸಿ
ಟಿಪ್ಸ್:
  • ಕಂಡೆನ್ಸ್ಡ್ ಮಿಲ್ಕ್ ಹಲ್ವಾದ ಹದ ಮತ್ತು ರುಚಿಯನ್ನು ಹೆಚ್ಚಿಸುತ್ತದೆ.ಬರಿ ಹಾಲಿನಲ್ಲೂ ಮಾಡಬಹುದು.
  • ಏಲಕ್ಕಿ ಪುಡಿ ಬೇಡವಾದಲ್ಲಿ ಬಿಡಿ.


No comments:

Post a Comment