Saturday, 15 April 2017

ಅಕ್ಕಿ ಮಣ್ಣಿ/ಹಾಲುಬಾಯಿ

       
             ಸಾಂಪ್ರದಾಯಿಕ ಕರ್ನಾಟಕ ಸಿಹಿ ತಿಂಡಿ "ಅಕ್ಕಿ ಮಣ್ಣಿ /ಹಾಲು ಬಾಯಿ"  ಬಾಯಲ್ಲಿಟ್ಟರೆ ಕರಗುವಂತ ತಿನಿಸು. ಇದನ್ನು ರಾಗಿಹಿಟ್ಟು & ಗೋಧಿಹಿಟ್ಟಿನಿಂದಲೂ ತಯಾರಿಸಬಹುದು. ಚಿಕ್ಕವರಿದ್ದಾಗ ಅಜ್ಜಿ ಮಾಡಿ ಕೊಡುತ್ತಿದ್ದರು. ಅಜ್ಜಿಯ ಕೈರುಚಿ ತಿಂದರೆ ಅದೇ ಸ್ವರ್ಗ ಅಲ್ವೇ. ಅವರನ್ನೇ ಕೇಳಿ ಈ ಸಿಹಿ ತಿನಿಸನ್ನು ಶೇರ್ ಮಾಡಿದ್ದೇನೆ....

ಬೇಕಾಗುವ ಸಾಮಾಗ್ರಿಗಳು:

  • ಅಕ್ಕಿ 1 ಕಪ್
  • ಬೆಲ್ಲ 1 ಕಪ್
  • ತೆಂಗಿನ ಕಾಯಿ 1/2ಕಪ್
  • ಏಲಕ್ಕಿ ಪುಡಿ 1/4ಟೀ ಚಮಚ ಅಥವಾ ಏಲಕ್ಕಿ-3
  • ಉಪ್ಪು ಚಿಟಿಕೆ
  • ತುಪ್ಪ 2 ಟೇಬಲ್ ಚಮಚ

  • ಮಾಡುವ ವಿಧಾನ:
    1. ಅಕ್ಕಿಯನ್ನು 6 ಗಂಟೆಗಳ ಕಾಲ ನೆನೆಸಿ, ತೆಂಗಿನ ತುರಿ, ಏಲಕ್ಕಿ ಸೇರಿಸಿ ನುಣ್ಣಗೆ ರುಬ್ಬಿ. 
    2. ರುಬ್ಬಿರುವ ಹಿಟ್ಟಿಗೆ ಬೆಲ್ಲ ಸೇರಿಸಿ ಕರಗಿಸಿ,ನೀರು ಸೇರಿಸಿ ತೆಳುವಾದ ಹಿಟ್ಟು ತಯಾರಿಸಿ.
    3. ಒಂದು ದಪ್ಪ ತಳದ ಬಾಣಲೆಗೆ ರುಬ್ಬಿದ ಮಿಶ್ರಣ, ಉಪ್ಪು, ಸೇರಿಸಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ.
    4. ಹಿಟ್ಟು ತಳ ಹಿಡಿಯದಂತೆ ನಿಧಾನವಾಗಿ ತಿರುಗಿಸುತ್ತಲೇ ಇರಬೇಕು. ಇದು 10-15 ನಿಮಿಷ ಹಿಡಿಯುತ್ತದೆ.
    5.  ಮಿಶ್ರಣ ಬಾಣಲೆ ಬಿಡುವ ಹಂತಕ್ಕೆ ತುಪ್ಪ ಹಾಕಿ , ಬಾಣಲೆ ಬಿಟ್ಟು ಮಿಶ್ರಣ ಒಂದು ಉಂಡೆಯ ಹದಕ್ಕೆ ಬಂದಮೇಲೆ ತುಪ್ಪ ಸವರಿದ ಪ್ಲೇಟ್ ಗೆ ಹರಡಿ ಕಟ್ ಮಾಡಿ. 
    6. ಬೇಕಿದ್ದರೆ ಅಲಂಕಾರಕ್ಕೆ ಬಾದಾಮಿ ಗೋಡಂಬಿ ಉಪಯೋಗಿಸಬಹುದು.
    *ಮಾಡಿ ನೋಡಿ...ತಿನ್ನಿ ತಿಳಿಸಿ...

    No comments:

    Post a Comment