Wednesday, 19 April 2017

ಬಿಸಿಬೇಳೆ ಬಾತ್

    ಬೆಳಗ್ಗಿನ ತಿಂಡಿಗಳಲ್ಲಿ ಇದು ಒಂದು.ಸುಲಭ ಹಾಗೂ ರುಚಿಕರ.

ಬೇಕಾಗುವ ಸಾಮಾಗ್ರಿಗಳು:

  • ಅಕ್ಕಿ -1/2 ಕಪ್
  • ತೊಗರಿಬೇಳೆ1-1/2ಕಪ್
  • ಶೇಂಗಾಕಾಳು-1ಟೀ ಚ
  • ತರಕಾರಿಗಳು-1ಕಪ್(ಬೀನ್ಸ್, ಕ್ಯಾರೆಟ್, ಆಲೂಗಡ್ಡೆ, ಗಡ್ಡೆಕೋಸು)
  • ಟೊಮೆಟೋ-1 ದೊಡ್ಡದು
  • ಈರುಳ್ಳಿ-1
  • ಹುಣಸೇರಸ-1/4 ಕಪ್
  • ಬೆಲ್ಲ-1/4 ಟೀ ಚ
  • ಉಪ್ಪು-ರುಚಿಗೆ
  • ಬಿಸಿಬೇಳೆ ಬಾತ್ ಪುಡಿ-4ಟೀ ಚ
ಒಗ್ಗರಣೆಗೆ:

  • ತುಪ್ಪ-2ಟೀ ಚ
  • ಸಾಸಿವೆ-1/2 ಟೀ ಚ
  • ಕರಿಬೇವು-1ಎಳೆ
  • ಗೋಡಂಬಿ- 4-5
  • ದೊಣ್ಣೆಮೆಣಸು-1/2(ಬೇಕಾದಲ್ಲಿ)
  • ಈರುಳ್ಳಿ-1 ಸಣ್ಣದು
ಮಾಡುವ ವಿಧಾನ:

  1. ಮೊದಲಿಗೆ ಒಂದು ಕುಕ್ಕರ್ ತೆಗೆದುಕೊಳ್ಳಿ,ಅದರಲ್ಲಿ ಅಕ್ಕಿ ಮತ್ತು ತೊಗರಿಬೇಳೆಯನ್ನು  ಸಮಪ್ರಮಾಣದಲ್ಲಿ ತೊಳೆದು ಹಾಕಿ,4ಕಪ್ ನೀರು ಸೇರಿಸಿ.
  2. ಹೆಚ್ಚಿದ ಎಲ್ಲ ತರಕಾರಿಗಳನ್ನು ಸೇರಿಸಿ,ಶೇಂಗಾಕಾಳು, ಟೊಮೆಟೋ, ಈರುಳ್ಳಿ,ಉಪ್ಪು, ಹಾಕಿ ಕುಕ್ಕರ್ ಮುಚ್ಚಿ ಮೆತ್ತಗೆ ಬೇಯಿಸಿ.
  3. ಬೆಂದ ಬೇಳೆ, ತರಕಾರಿ ಮಿಶ್ರಣವನ್ನು ಮಿಕ್ಸ್ ಮಾಡಿ,ಅದಕ್ಕೆ ಹುಣಸೆರಸ, ಬಿಸಿಬೇಳೆ ಬಾತ್ ಪುಡಿ,ಬೆಲ್ಲ,ಬೇಕಾದಲ್ಲಿ ನೀರು ಸೇರಿಸಿ,ಬೇಕಾದ ಹದಕ್ಕೆ ಮಾಡಿ, ಉಪ್ಪು ಖಾರ ರುಚಿ ನೋಡಿ.
  4. ಮೇಲೆ ತಿಳಿಸಿದ ಒಗ್ಗರಣೆ ಸಾಮಗ್ರಿಗಳಿಂದ ಒಗ್ಗರಣೆ ಕೊಡಿ.
  5. ರುಚಿ-ರುಚಿಯಾದ ಬಿಸಿಬೇಳೆ ಬಾತ್ ಖಾರ ಬೂoದಿಯೊಂದಿಗೆ ಸವಿಯಲು ಸಿದ್ಧ. 
ಟಿಪ್ಸ್:

  • ಗೋಡಂಬಿ,ದೊಣ್ಣೆಮೆಣಸು ಬೇಕಾದಲ್ಲಿ ಮಾತ್ರ ಸೇರಿಸಿ.
  • ತುಪ್ಪದ ಒಗ್ಗರಣೆ ರುಚಿಯನ್ನು ಎರಡರಷ್ಟು ಹೆಚ್ಚಿಸುತ್ತದೆ.
*ಮಾಡಿ ನೋಡಿ...ತಿಂದು ತಿಳಿಸಿ...

No comments:

Post a Comment