ಸಂಕ್ರಾಂತಿ ಅಥವಾ ಪೊಂಗಲ್ ಹಬ್ಬಕ್ಕೆ ಸಾಂಪ್ರದಾಯಿಕವಾಗಿ ಮಾಡುವ ಅಡುಗೆ ಇದು. ಇಲ್ಲವಾದಲ್ಲಿ ನೀವು ತಿನ್ನಲು ಬಯಸಿದಾಗ ಮಾಡಿಕೊಳ್ಳುವಂಥ ಸುಲಭ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು:
ಹೆಸರುಬೇಳೆ-1/2ಕಪ್
ಅಕ್ಕಿ-1/2ಕಪ್
ಕಾಯಿತುರಿ-1/2ಕಪ್
ಹಸಿಮೆಣಸು-3
ಶುಂಠಿ1-1ಇಂಚು
ಜೀರಿಗೆ
ಕಾಳುಮೆಣಸು
ಕರಿಬೇವು
ಕೊತ್ತಂಬರಿಸೊಪ್ಪು
ಜೀರಿಗೆ ಪುಡಿ-1/2ಚಮಚ
ಅರಿಸಿನ-1/2ಚಮಚ
ಗೋಡಂಬಿ-4-5
ಮಾಡುವ ವಿಧಾನ:
1. ಮೊದಲಿಗೆ ಹೆಸರುಬೇಳೆ &ಅಕ್ಕಿಯನ್ನು ಬೇರೆಬೇರೆಯಾಗಿ ಹುರಿದು ಆರಲು ಬಿಡಿ.
2.ಆರಿದ್ದನ್ನು ತೊಳೆದು ಕುಕ್ಕರಿನಲ್ಲಿ ಹಾಕಿ ನೀರು ಹಾಕಿ ಬೇಯಿಸಿ.
3.ಬಾಣಲೆಗೆ ತುಪ್ಪ ಹಾಕಿ ಹುರಿದು ತೆಗೆದಿಡಿ.
ಶುಂಠಿ, ಹಸಿಮೆಣಸು, ಜೀರಿಗೆ, ಕಾಳುಮೆಣಸು, ಕರಿಬೇವು ಒಗ್ಗರಣೆ ಮಾಡಿ.
4.ಬೆಂದ ಮಿಶ್ರಣಕ್ಕೆ ಮತ್ತೆ 2ಲೋಟ ನೀರು ಹಾಕಿ,ಉಪ್ಪು ಅರಿಸಿನ, ಜೀರಿಗೆ ಪುಡಿ ,ಕಾಯಿತುರಿ ಹಾಕಿ ಒಂದು ಕುದಿ ಕುದಿಸಿ.
5.ಈಗ ಒಗ್ಗರಣೆ, ಗೋಡಂಬಿ ಹಾಕಿ ಮತ್ತೆ ಕುದಿಸಿ.
6.ಸ್ವಲ್ಪ ನೀರಾಗಿರಲಿ ಆರಿದ ಮೇಲೆ ಗಟ್ಟಿಯಾಗುತ್ತದೆ.
ಇದನ್ನು ಚಟ್ನಿ ಅಥವಾ ರಾಯಿತ ದೊಂದಿಗೆ ಸವಿಯಬಹುದು
ಮಾಡಿ ತಿನ್ನಿ