ಈಗ ಮಾವಿನಕಾಯಿ ಸೀಸನ್ ಅಲ್ವಾ. ಬೇಗ ಬೇಗ ತಂದು ಚಿತ್ರಾನ್ನ ಮಾಡಿ ರುಚಿ ನೋಡಿ.
ಬೇಕಾಗುವ ಸಾಮಾಗ್ರಿಗಳು:
ಬೇಕಾಗುವ ಸಾಮಾಗ್ರಿಗಳು:
- 250 gm ಅನ್ನ
- 1 ಮಧ್ಯಮ ಗಾತ್ರದ ಮಾವಿನಕಾಯಿ
- 1/4 ಕಪ್ ತೆಂಗಿನತುರಿ
- ಕೊತ್ತಂಬರಿ ಸೊಪ್ಪು ಸ್ವಲ್ಪ
- 3 ಚಮಚ ಎಣ್ಣೆ
- 1/2 ಚ ಸಾಸಿವೆ
- 1/4 ಚ ಜೀರಿಗೆ
- 1/4 ಕಪ್ ಶೇಂಗಾಕಾಳು
- 1 ಹಿಡಿ ಕರಿಬೇವು
- 1/2 ಚ ಅರಿಸಿನ
- 1/2 ಚ ಕಡ್ಲೆಬೇಳೆ
- 1/2 ಚ ಉದ್ದಿನಬೇಳೆ
ಮಾಡುವ ವಿಧಾನ:
- ಮೊದಲಿಗೆ ಮಾವಿನಕಾಯಿ ತುರಿದು,ತೆಂಗಿನತುರಿಯೊಂದಿಗೆ ರುಬ್ಬಿ ಇಡಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ , ಸಾಸಿವೆ ಹಾಕಿ ಸಿಡಿಸಿ.
- ಜೀರಿಗೆ,ಕಡ್ಲೆಬೇಳೆ, ಉದ್ದಿನಬೇಳೆ,ಕರಿಬೇವು ಹುರಿಯಿರಿ.
- ಅದಕ್ಕೆ ಅರಿಶಿನ, ಶೇಂಗಾಕಾಳು ಹಾಕಿ ಕೈಯಾಡಿಸಿ, ಸಿಡಿಯಲು ಪ್ರಾರಂಭ ಆದಾಗ ಹಸಿಮೆಣಸು ಹಾಕಿ ಹುರಿಯಿರಿ.
- ಈಗ ಮಾವಿನಕಾಯಿತುರಿ & ಕಾಯಿತುರಿ ರುಬ್ಬಿದ ಮಿಶ್ರಣ, ಉಪ್ಪು ಸೇರಿಸಿ ಕಲಕಿ.
- ಗೊಜ್ಜು ರೆಡಿಯಾದ ಮೇಲೆ ತಯಾರಿಸಿಟ್ಟಿರುವ ಅನ್ನ ಸೇರಿಸಿ ಅನ್ನ ಪುಡಿಯಾಗದಂತೆ ನಿಧಾನವಾಗಿ ಮಿಶ್ರ ಮಾಡಿ.
- ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿಸೊಪ್ಪು ಸೇರಿಸಿ.
- ಶೇಂಗಾ ಚಟ್ನಿಪುಡಿ , ಉಪ್ಪಿನಕಾಯಿಯೊಂದಿಗೆ ಸವಿಯಿರಿ.
ಟಿಪ್ಸ್:
- ಮಾವಿನಕಾಯಿ & ತೆಂಗಿನತುರಿ ಒಟ್ಟಿಗೆ ರುಬ್ಬುವ ಬದಲು,ಬೇರೆ ಬೇರೆಯಾಗಿ ಸೇರಿಸಬಹುದು.
- ಮಾವಿನಕಾಯಿ ಎಷ್ಟು ಹುಳಿ ಇದೆ ಎಂದು ಮೊದಲೇ ನೋಡಿಕೊಳ್ಳಿ.
*ಮಾಡಿ ನೋಡಿ...ತಿಂದು ತಿಳಿಸಿ...
No comments:
Post a Comment