ಬೇಕಾಗುವ ಸಾಮಾಗ್ರಿಗಳು:
- 1 ಕಪ್ ಒಣಮೆಣಸಿನಕಾಯಿ
- 1/4 ಚಮಚ ಉದ್ದಿನಬೇಳೆ
- 3/4 ಚಮಚ ಮೆಂತ್ಯಕಾಳು
- 3/4 ಚಮಚ ಜೀರಿಗೆ
- 3/4 ಚಮಚ ಸಾಸಿವೆ
- 1/2 ಕಪ್ ಧನಿಯಾ ಕಾಳು
- 10-15 ಕರಿಬೇವು
- 1/4 " ಅರಿಸಿನಕೊಂಬು
- 1/4 ಚಮಚ ಇಂಗಿನಪುಡಿ
ಮಾಡುವ ವಿಧಾನ:
- ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಎಣ್ಣೆ ಹಾಕದೆ ಬೇರೆ ಬೇರೆಯಾಗಿ ಸಣ್ಣ ಉರಿಯಲ್ಲಿ ಘಮ ಬರುವವರೆಗೆ ಹುರಿಯಿರಿ.
- ಪೂರ್ತಿ ತಣ್ಣಗಾಗಲು ಬಿಡಿ.
- ಆರಿದ ಮೇಲೆ ಒಂದು ಮಿಕ್ಸಿ ಜಾರಿಗೆ ಸೇರಿಸಿ ನುಣ್ಣಗೆ ರುಬ್ಬಿ. ನೀವು ಜಾಸ್ತಿ ಅಳತೆ ಮಾಡುವುದಾದಲ್ಲಿ ಗಿರಣಿಯಲ್ಲಿ ಪುಡಿ ಮಾಡಿಸಿ.
- ಈ ಸಾರಿನ ಪುಡಿ ಸಾಂಬಾರ್ ,ಪಲ್ಯ ಎಲ್ಲವಕ್ಕೂ ಬಳಸಬಹುದು.
***ಮಾಡಿ ನೋಡಿ...ತಿನ್ನಿ ತಿಳಿಸಿ...
No comments:
Post a Comment