Sunday, 14 January 2018

ಸಂಕ್ರಾಂತಿ ಎಳ್ಳು-ಬೆಲ್ಲ

       
 ಸಂಕ್ರಾಂತಿ ಹಬ್ಬ ತುಂಬಾ ವಿಶೇಷವಾದ ಹಬ್ಬ. ಸೂರ್ಯದೇವನು ಪುತ್ರ ಶನಿಯನ್ನು ನೋಡಲು ಬರುವ ದಿನ. ರಾಮನು ಸೀತೆಯನ್ನು ರಾವಣ ನಿಂದ ರಕ್ಷಿಸಿ ಅಯೋದ್ಯೆಗೆ ಕರೆ ತಂದ ದಿನ.
          ಹೆಣ್ಣು ಮಕ್ಕಳು ಹೊಸ ಬಟ್ಟೆ ಧರಿಸಿ, ಸಿಂಗರಿಸಿಕೊಂಡು ಎಳ್ಳು ಬೆಲ್ಲ ಹಂಚುತ್ತಾ ಒಳ್ಳೊಳ್ಳೆ ಮಾತಾಡಿ ,ದ್ವೇಷ ಮರೆತು ಸ್ನೇಹದಿಂದ ಇರುವ ಎಂದು ಸಾರುವ ದಿನ.
         ಉತ್ತರಕರ್ನಾಟಕದಲ್ಲಿ ಈ ಹಬ್ಬವನ್ನು ವಿಶೇಷವಾಗಿ ಊಟದ ಬುತ್ತಿ ಕಟ್ಟಿಕೊಂಡು ಮನೆಯಿಂದ ಹೊರಗೆ ಯಾವುದಾದರೂ ತೋಟ, ಹೊಳೆ ಹೀಗೆ ಅವರಿಗಿಷ್ಟವಾದ ಜಾಗದಲ್ಲಿ ಬಂಧು ಬಳಗ ಸೇರಿ ಉಂಡು ಸಂಭ್ರಮಿಸುತ್ತಾರೆ.ಎತ್ತುಗಳನ್ನು ಸಿಂಗರಿಸಿ ಕೆಂಡ ಹಾಯುವ ಕ್ರೀಡೆ ಆಡುವುದು. ಹೀಗೆ ಹೇಳಿದರೆ ಮುಗಿಯದ ಹಬ್ಬದ ಸಂಭ್ರಮ.
ಹೆಂಗಳೆಯರು ಮನೆಮನೆಗೆ ಹೋಗಿ ಹಂಚುವ ಎಳ್ಳು ಬೆಲ್ಲ ರೆಸಿಪಿ ಇಲ್ಲಿ ತಿಳಿಸಿದ್ದೇನೆ.
ಬೇಕಾಗುವ ಸಾಮಾಗ್ರಿಗಳು:
ಹುರಿದು ಸಿಪ್ಪೆ ತೆಗೆದ ಶೇಂಗಾ-1ಕಪ್
ಒಣಕೊಬ್ಬರಿ ಚೂರು-1ಕಪ್
ಬೆಲ್ಲದ ಚುರು-1ಕಪ್
ಹುರಿದ ಬಿಳಿ ಎಳ್ಳು-3/4ಕಪ್
ಹುರಿಗಡಲೆ/ಪುಟಾಣಿ-3/4ಕಪ್
ಸಿಹಿ ಜೀರಿಗೆ-1/2ಕಪ್
ಸಕ್ಕರೆ ಮಿಠಾಯಿ-1/2ಕಪ್
ಸಕ್ಕರೆ ಗೊಂಬೆ-ಇದ್ದಲ್ಲಿ
ಮಾಡುವ ವಿಧಾನ:
1. ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಅದೇ ಅಳತೆಯಲ್ಲಿ ತೆಗೆದುಕೊಂಡು ಕೂಡಿಸಿ.
2.ಸಣ್ಣ ಜಿಪ್ ಲಾಕ್ ಕವರ್ ತೆಗೆದುಕೊಂಡು ಒಂದು ಸಕ್ಕರೆ ಗೊಂಬೆಯೊಂದಿಗೆ ಸ್ವಲ್ಪ ಮಿಶ್ರಣ ಹಾಕಿ ಸೀಲ್ ಮಾಡಿ ಕೊಡಿ.

No comments:

Post a Comment