Monday, 28 August 2017

ಹೀರೆಕಾಯಿ ಬಜ್ಜಿ/ Ridgegourd bajji

   

ಹೀರೆಕಾಯಿ ಬಜ್ಜಿ ಸಂಜೆಯ ತಿಂಡಿ . ಬೇಗ ಆಗುವ ಕಡಿಮೆ ಸಾಮಗ್ರಿ ಬಳಸಿ ಮಾಡುವ ತಿನಿಸು. ಹೀರೆಕಾಯಿ ಸಿಪ್ಪೆ ತೆಗೆದು ಇಟ್ಟಿದ್ದಲ್ಲಿ 10 ನಿಮಿಷದಲ್ಲಿ ಮಾಡಿ ತಿಂದು ಸಂತೋಷ ಪಡಬಹುದು.
ಬೇಕಾಗುವ ಸಾಮಾಗ್ರಿಗಳು:
ಹೀರೆಕಾಯಿ - 1
ಕಡಲೆಹಿಟ್ಟು-1/2 cup
ಖಾರದ ಪುಡಿ-1 ಚಮಚ
ಜೀರಿಗೆ/ಓಂ ಕಾಳು-1/4 ಚಮಚ
ಉಪ್ಪು-ರುಚಿಗೆ
ಬಿಸಿಎಣ್ಣೆ-1/2 ಚಮಚ
ಎಣ್ಣೆ-ಕರಿಯಲು
ಮಾಡುವ ವಿಧಾನ:
1.ಹೀರೆಕಾಯಿ ಸಿಪ್ಪೆ ತೆಗೆದು, ತೆಳ್ಳಗೆ ದುಂಡಗಾಗಿ ಹೆಚ್ಚಿ.
2.ಒಂದು ಬಟ್ಟಲಿಗೆ ಕಡಲೆಹಿಟ್ಟು, ಉಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ.
3.ನೀರು ಸೇರಿಸಿ ತೆಳ್ಳಗೆ ಹಿಟ್ಟನ್ನು ತಯಾರಿಸಿ,ಎಣ್ಣೆ ಕಾಯಲು ಇಡಿ.
4.ಹೀರೇಕಾಯಿಗಳನ್ನು ಒಂದೊಂದಾಗಿ ಹಿಟ್ಟಿನಲ್ಲಿ ಅದ್ದಿ, ಕರಿಯಿರಿ.
     ಮಾಡಿ ನೋಡಿ, ತಿಂದು ತಿಳಿಸಿ.


No comments:

Post a Comment