Sunday, 27 August 2017

ಕೊಬ್ಬರಿ ಮಿಠಾಯಿ/Coconut burfi

   
ಹಸಿ ಕೊಬ್ಬರಿ/ತೆಂಗಿನ ಕಾಯಿ ತುರಿ ಇದ್ದಲ್ಲಿ ಬೇಗ ಮಾಡಬಹುದಾದ ಸಿಹಿ ತಿನಿಸು ಈ ಕೊಬ್ಬರಿ ಮಿಠಾಯಿ.
ಬೇಕಾಗುವ ಸಾಮಗ್ರಿಗಳು:
ಹಸಿ ಕೊಬ್ಬರಿ ತುರಿ - 1 ಬಟ್ಟಲು
ಸಕ್ಕರೆ - 3/4 ಬಟ್ಟಲು
ಹಾಲು-1/4 ಬಟ್ಟಲು
ಏಲಕ್ಕಿ ಪುಡಿ- 1 ಚಿಟಿಕೆ
ತುಪ್ಪ-1ಚಮಚ

ಮಾಡುವ ವಿಧಾನ:
1.ದಪ್ಪ ತಳದ ಬಾಣಲೆ ಬಿಸಿ ಮಾಡಿ ಕಾಯಿತುರಿ ಹಾಕಿ ,ಜೊತೆಗೆ ಸಕ್ಕರೆ ಸೇರಿಸಿ ಕಲಸಿ.
2. ನಂತರ ಹಾಲು ಸೇರಿಸಿ ಚೆನ್ನಾಗಿ ಕೈಯಾಡಿಸಿ,1 ಚಮಚ ತುಪ್ಪ ಹಾಕಿ.
3. ಸಕ್ಕರೆ ಕರಗಿ ಮಿಶ್ರಣ ಒಂದು ಹದಕ್ಕೆ ಬರುವವರೆಗೆ ಕೈಯಾಡುತ್ತಿರಿ.
4. ಎಲ್ಲವೂ ಚೆನ್ನಾಗಿ ಮಿಶ್ರ ಆಗಿ ತಳ ಬಿಟ್ಟುಉಂಡೆಯಾಗುತ್ತ ಬಂದಾಗ ಏಲಕ್ಕಿ ಪುಡಿ ಸೇರಿಸಿ ತಕ್ಷಣ ಇಳಿಸಿ.
5.ಒಂದು ತುಪ್ಪ ಸವರಿದ ತಟ್ಟೆಗೆ ಸುರಿದು, ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ.
     ದಿಢಿರಾಗಿ ತಯಾರಾಗುವ ಸಿಹಿ ತಿನಿಸು ಸವಿಯಲು ಸಿದ್ಧ.
ಮಾಡಿ ನೋಡಿ, ತಿಂದು ತಿಳಿಸಿ.

No comments:

Post a Comment