Tuesday, 29 August 2017

ಮಿರ್ಚಿ/Mirchi/ಹಸಿಮೆಣಸಿನಕಾಯಿ ಬೋಂಡ

       
ಉತ್ತರ ಕರ್ನಾಟಕದ ವಿಶೇಷ ತಿನಿಸುಗಳಲ್ಲಿ ಮಿರ್ಚಿ ಕೂಡ ಒಂದು.ಸಂಜೆಯಾದರೆ ಸಾಕು ಮಿರ್ಚಿ ಮಂಡಕ್ಕಿ ಸುವಾಸನೆ ಮೂಗಿಗೆ ಬಡಿಯುತ್ತದೆ.
        ಎಲ್ಲಾ ರೀತಿಯ ಸಮಾರಂಭಗಳಲ್ಲಿ ಮಿರ್ಚಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದರೆ ಮಾಡುವ ವಿಧಾನ ತಿಳಿದುಕೊಳ್ಳೋಣ.
ಬೇಕಾಗುವ ಸಾಮಾಗ್ರಿಗಳು:
ಬಜ್ಜಿ ಮೆಣಸಿನಕಾಯಿ/ಖಾರವಿಲ್ಲದ ಹಸಿಮೆಣಸು-4-5
ಕಡಲೆಹಿಟ್ಟು-1ಬಟ್ಟಲು
ಜೀರಿಗೆ/ಓಂಕಾಳು-1ಚಮಚ
ಉಪ್ಪು-ರುಚಿಗೆ
ಅಡುಗೆ ಸೋಡಾ-ಚಿಟಿಕೆ
ಜೀರಿಗೆ ಪುಡಿ-1/2 ಚಮಚ
ಬಿಸಿಎಣ್ಣೆ-1ಚಮಚ
ಎಣ್ಣೆ-ಕರಿಯಲು
ಮಾಡುವ ವಿಧಾನ:
1.ಒಂದು ಬಟ್ಟಲಿಗೆ ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಹಾಕಿ .
2. ಬೇಕಾದಷ್ಟು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ತನ್ನಿ.
3.ಈಗ ಮೆಣಸಿನಕಾಯನ್ನು ಸೀಳಿ ಮಧ್ಯದಲ್ಲಿ ಜೀರಿಗೆ ಪುಡಿ ,ಉಪ್ಪು ಮಿಶ್ರಣ ಸೇರಿಸಿ.
4.ತಯಾರಿಸಿದ ಹಿಟ್ಟಿನಲ್ಲಿ ಅದ್ದಿ ಕರಿಯಿರಿ.

ಸೂಚನೆ:
* ಮೆಣಸಿನಕಾಯಿ ಒಳಗೆ ತುಂಬಲು ಜೀರಿಗೆ, ಉಪ್ಪಿನ ಜೊತೆ ಒಣಕೊಬ್ಬರಿ ಪುಡಿ ಉಪಯೋಗಿಸಬಹುದು.
*ಮೆಣಸಿನಕಾಯಿ ದೊಡ್ಡದಿದ್ದಲ್ಲಿ ಮಧ್ಯ ಕತ್ತರಿಸಿ, ಇಲ್ಲವಾದಲ್ಲಿ ತುದಿ ಅಷ್ಟೇ ತೆಗೆಯಿರಿ.
*ಮಸಾಲ ಮಿರ್ಚಿ ಮಾಡಲು, ಕರಿದ ಮಿರ್ಚಿ ಮಧ್ಯ ಕತ್ತರಿಸಿ ಈರುಳ್ಳಿ, ಕೊತ್ತಂಬರಿ ಸೊಪ್ಪು, ಸೇವ್ ಸೇರಿಸಿ ಸವಿಯಿರಿ.

    ಮಾಡಿ ನೋಡಿ,ತಿಂದು ತಿಳಿಸಿ.

No comments:

Post a Comment