ಸೊಪ್ಪು ಬೇಳೆ ಪಲ್ಯ ರೊಟ್ಟಿ, ಚಪಾತಿಯ ಜೊತೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು:
ತೊಗರಿಬೇಳೆ-1/4 ಬಟ್ಟಲು
ಸೊಪ್ಪುಗಳು(ದಂಟು,ಹರಿವೆ, ರಾಜಗಿರ, ಸಬ್ಬಸಿಗೆ)-1ಬಟ್ಟಲು
ಹಸಿಮೆಣಸು-1 ರಿಂದ 2
ಈರುಳ್ಳಿ-1
ಬೆಳ್ಳುಳ್ಳಿ-4 ಎಸಳು
ಸಾಸಿವೆ-1/2ಚಮಚ
ಅರಿಸಿನ-1/4 ಚಮಚ
ಕಾಯಿತುರಿ-1/4 ಬಟ್ಟಲು
ಉಪ್ಪು-ರುಚಿಗೆ
ಎಣ್ಣೆ-2 ಚಮಚ
ಮಾಡುವ ವಿಧಾನ:
1. ಒಂದು ಪಾತ್ರೆಯಲ್ಲಿ ನೀರು ಕುದಿಸಿ, ತೊಳೆದ ತೊಗರಿಬೇಳೆಯನ್ನು ಹಾಕಿ ಬೇಯಿಸಿ (ಮೆತ್ತಗಾಗಬಾರದು).
2.ಬೇಯಿಸಿದ ಬೇಳೆಯನ್ನು ಸೋಸಿ ಇಡಿ.
3.ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ ಸಿಡಿಸಿ,ಬೆಳ್ಳುಳ್ಳಿ ಹಾಕಿ ಹುರಿಯಿರಿ.
4.ಈಗ ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ.
5.ನಂತರ ಸಣ್ಣಗೆ ಹೆಚ್ಚಿದ ಸೊಪ್ಪನ್ನು ಹಾಕಿ ಬೇಯಿಸಿ.
6.ಬೇಯಿಸಿದ ಬೇಳೆ, ಸ್ವಲ್ಪ ಬೇಳೆಕಟ್ಟು (ಬೇಕಾದಲ್ಲಿ), ಉಪ್ಪ್ಪು, ಸೇರಿಸಿ ಬೇಯಿಸಿ.
7.ಕೊನೆಯಲ್ಲಿ ಕಾಯಿತುರಿ ಹಾಕಿ ಕೈಯಾಡಿದರೆ ಸೊಪ್ಪು-ಬೇಳೆ ಪಲ್ಯ ಸವಿಯಲು ಸಿದ್ಧ.

No comments:
Post a Comment