Monday, 4 September 2017

ಸ್ಪಾಂಜ್ ಕೇಕ್ ಕುಕ್ಕರಿನಲ್ಲಿ/sponge cake without oven


ಮನೆಯಲ್ಲಿ ಕೇಕ್ ಮಾಡುವುದೆಂದರೆ ಕಷ್ಟಸಾಧ್ಯ ಅಂದುಕೊಳ್ಳುವವರೆ ಜಾಸ್ತಿ. ನಾನು ಮೊದಲಿಗೆ ಹಾಗೆ ತಿಳಿದಿದ್ದೆ. ನಮ್ಮ ಮನೆಯಲ್ಲಿ ಓವನ್ ಇಲ್ಲ ಆದ್ದರಿಂದ ಕುಕ್ಕರಿನಲ್ಲಿ ಕೇಕ್ ಮಾಡಲು ಪ್ರಯತ್ನಿಸಿದೆ. ತುಂಬಾ ಚೆನ್ನಾಗಿ ಬಂತು .ನನ್ನ ಮಗನಿಗಾಗಿ ಈ ಪ್ರಯತ್ನ.
ಬೇಕಾಗುವ ಸಾಮಗ್ರಿಗಳು:
ಮೈದಾಹಿಟ್ಟು-1 ಬಟ್ಟಲು
ಸಕ್ಕರೆಪುಡಿ-1ಬಟ್ಟಲು
ಮೊಟ್ಟೆ-3-4
ಬೇಕಿಂಗ್ ಪೌಡರ್-1 ಚಮಚ
ಬೇಕಿಂಗ್ ಸೋಡಾ-1/4 ಚಮಚ
ವೆನಿಲ್ಲಾ ಎಸೆನ್ಸ್-1/2 ಚಮಚ
ಬೆಣ್ಣೆ ಅಥವಾ ಎಣ್ಣೆ -1 ಬಟ್ಟಲು
ಮಾಡುವ ವಿಧಾನ:
1. ಮೊದಲಿಗೆ ಮೈದಾಹಿಟ್ಟು, ಸಕ್ಕರೆಪುಡಿ, ಬೇಕಿಂಗ್ ಪೌಡರ್, ಸೋಡಾ ಎಲ್ಲವನ್ನು ಜರಡಿ ಹಿಡಿದುಕೊಳ್ಳಿ.
2. ಮಿಕ್ಸಿ ಜಾರಿಗೆ ಹಿಟ್ಟು ಹಾಕಿ, ಮೊಟ್ಟೆ, ಎಣ್ಣೆ/ಬೆಣ್ಣೆ, ವೆನಿಲ್ಲಾ ಎಸೆನ್ಸ್ ಸೇರಿಸಿ ರುಬ್ಬಿ.
3. ದೋಸೆ ಹಿಟ್ಟಿನಂತೆ ಆಗುತ್ತದೆ (ಗಂಟಾಗಬಾರದು).
4.ಕೇಕ್ ಪಾತ್ರೆಗೆ ಎಣ್ಣೆ ಸವರಿ, ತೆಳ್ಳಗೆ ಮೈದಾಹಿಟ್ಟು ಉದುರಿಸಿ ,ರುಬ್ಬಿದ ಮಿಶ್ರಣ ಸುರಿದು 3 ಸಲ ಕುಟ್ಟಿ(ಗಾಳಿ ಸಿಕ್ಕಿಕೊಳ್ಳದಿರಲು).
5.ಕುಕ್ಕರಿಗೆ ಉಪ್ಪು ಅಥವಾ ಮರಳನ್ನು ಹರಡಿ ಒಂದು ರಿಂಗ್ ಅಥವಾ ತಟ್ಟೆ ಇಟ್ಟು ,5 ನಿಮಿಷ ಬಿಸಿ ಮಾಡಿ, ಆಮೇಲೆ ಕೇಕ್ ಪಾತ್ರೆಯನ್ನು ಇಟ್ಟು ಕುಕ್ಕರ್ ಮುಚ್ಚಳ ಮುಚ್ಚಿ, ವಿಸಲ್ ಹಾಕಬೇಡಿ.
6. ಸಣ್ಣ ಉರಿಯಲ್ಲಿ 60 ನಿಮಿಷ ಬೇಯಿಸಿ.
7. ಕೊನೆಯಲ್ಲಿ ಕಡ್ಡಿಯಿಂದ ಚುಚ್ಚಿದರೆ ಅಂಟಿಕೊಳ್ಳದಂತೆ ಬರಬೇಕು.
8. ಈಗ ಓವನ್ ಇಲ್ಲದೆ ಕುಕ್ಕರಿನಲ್ಲಿ ಸ್ಪಂಜಿ ಕೇಕ್ ತಿನ್ನಲು ತಯಾರು.
ಸೂಚನೆ:
* ಬ್ಲೇನ್ಡರ್ ಇದ್ದಲ್ಲಿ ಮಿಕ್ಸಿಗೆ ಹಾಕುವ ಅಗತ್ಯ ಇಲ್ಲ. ಮೊಟ್ಟೆ ,ಸಕ್ಕರೆ ಬ್ಲೇನ್ಡ್ ಮಾಡಿ ಹಿಟ್ಟುಗಳನ್ನು ಸೇರಿಸಿ ಚೆನ್ನಾಗಿ ಮಗುಚಿ.
*ವೆನಿಲ್ಲಾ ಎಸ್ಸೆನ್ಸ್ ರುಚಿ ,ಪರಿಮಳ ಹೆಚ್ಚಿಸಲು ಅಷ್ಟೇ. ಬೇಡವಾದಲ್ಲಿ ಬಿಡಿ.

No comments:

Post a Comment